ಮಾನವ ಹಕ್ಕು ಎಂಬುದು ಪಾಶ್ಚಾತ್ಯ ಸಂಸ್ಕೃತಿಗೇ ವಿಶಿಷ್ಟವಾದ ಕಲ್ಪನೆ. ಅದು ಗಾಡ್ ಮನುಷ್ಯನಿಗೆ ನೀಡಿದ ಹಕ್ಕು ಯಾವ ಸ್ವರೂಪದ್ದು ಎಂಬ ಜಿಜ್ಞಾಸೆಯಿಂದ ರೂಪುಗೊಂಡ ಕಲ್ಪನೆ. ಸೆಕ್ಯುಲರ್ ಚಿಂತನೆಯಲ್ಲಿ ಗಾಡ್ನನ್ನು ಬಿಟ್ಟು ಮಾನವ ಹಕ್ಕಿನ ಕಲ್ಪನೆ ಬೆಳೆಯಿತು. ಆದರೆ ಅದರ ಜೊತೆಗೆ ಬಗೆಹರಿಯದ…
-
-
ಫ್ರೀಡಂ ಎಂದರೆ ಯಾವುದೇ ನಿರ್ಬಂಧವಿಲ್ಲದ ಮುಕ್ತಸ್ಥಿತಿ. ಮನುಷ್ಯನು ಹುಟ್ಟಾ ಮುಕ್ತ ಎಂಬುದಾಗಿ ಪಾಶ್ಚಾತ್ಯ ರಾಜಕೀಯ ಚಿಂತನೆ ತಿಳಿಸುತ್ತದೆ. ಈ ವಾಕ್ಯವು ಮೂಲತಃ ಥಿಯಾಲಜಿಯಲ್ಲಿ ಬರುವಂಥದ್ದು. ಪ್ರತೀ ಮನುಷ್ಯನಲ್ಲೂ ಗಾಡ್ ರಚಿಸಿದ ಸೋಲ್ ಎಂಬ ಆಂತರಿಕ ಅಂಗವು ಇರುತ್ತದೆ ಹಾಗೂ ಅದು ಸತ್ಯದೇವನ…
-
ಪಾಶ್ಚಾತ್ಯ ಸಾಮಾಜಿಕ, ರಾಜಕೀಯ ಹಾಗೂ ಮನಃಶಾಸ್ತ್ರೀಯ ಸಿದ್ಧಾಂತಗಳಿಗೆಲ್ಲ ಮೂಲಾಧಾರವಾಗಿ ವ್ಯಕ್ತಿ ಹಾಗೂ ಸಮಾಜಗಳ ಕುರಿತ ಅವರ ಕಲ್ಪನೆಗಳಿವೆ. ಅವರ ಪ್ರಕಾರ ವ್ಯಕ್ತಿಯೊಬ್ಬನಲ್ಲಿ ಸೆಲ್ಫ್ (ಸ್ವಂತಿಕೆ) ಎಂಬುದಿರುತ್ತದೆ. ಅದಕ್ಕೊಂದು ಸ್ವಾಯತ್ತತೆ ಇದೆ. ಸುತ್ತಲಿನ ಸಮಾಜವು ಅದನ್ನು ನಿರ್ಧರಿಸುವ ಶಕ್ತಿಯಲ್ಲ. ಇಂಥ ಸಮಾಜದಲ್ಲಿ ಸ್ವಾತಂತ್ರ್ಯ,…
-
ಭಯೋತ್ಪಾದನೆಯು ಇಂದು ವಿಶ್ವಶಾಂತಿಗೆ ದೊಡ್ಡ ಸವಾಲಾಗಿದೆ. ಇತ್ತೀಚೆಗೆ ಬೇರೆ ಬೇರೆ ಬೇಡಿಕೆಗಳನ್ನು ಇಟ್ಟು ಸರ್ಕಾರಗಳನ್ನು ಬಗ್ಗಿಸಲಿಕ್ಕಾಗಿ ಬೇರೆ ಬೇರೆ ಹೋರಾಟದ ಗುಂಪುಗಳು ಭಯೋತ್ಪಾದನೆಗೆ ಇಳಿದಿವೆ. ಇಂಥ ಕೃತ್ಯಗಳನ್ನು ಹೇಗೆ ಅರ್ಥೈಸಿದರೆ ಅವುಗಳನ್ನು ನಿಯಂತ್ರಿಸಬಹುದು? ಚಾಲ್ತಿಯಲ್ಲಿರುವ ಅಭಿಪ್ರಾಯಗಳು ಇಂಥವರನ್ನು ಮಾನಸಿಕ ರೋಗಿಗಳು ಅಂತಲೋ,…
-
ಆಧುನಿಕ ಕಾಲದಲ್ಲಿ ಕಾನೂನುಗಳನ್ನಾಧರಿಸಿ ಅಳವಡಿಸಿಕೊಂಡ ನ್ಯಾಯ ಪದ್ಧತಿಯೇ ಶ್ರೇಷ್ಠ ಎಂಬ ಧೋರಣೆ ಬೆಳೆದಿದೆ. ಹಾಗಾಗಿ ಭಾರತದಂಥ ದೇಶಗಳಲ್ಲಿ ಪ್ರಚಲಿತದಲ್ಲಿರುವ ದೇಶೀ ನ್ಯಾಯ ಪದ್ಧತಿಗಳನ್ನು ಆದಷ್ಟೂ ನಾಶ ಮಾಡಿದರೇ ಜನರಿಗೆಲ್ಲ ನ್ಯಾಯ ಸಿಗುವುದು ಸಾಧ್ಯ ಎಂಬ ಪ್ರತಿಪಾದನೆಗಳು ಇವೆ. ಆದರೆ ಇವೆರಡನ್ನೂ ತುಲನೆ…
-
ಭಾರತೀಯರು ಕಾನೂನುಗಳ ಜೊತೆಗೇ ಕಾನೂನಿನ ಪರಿಭಾಷೆಗಳನ್ನು ಹಾಗೂ ಪರಿಕಲ್ಪನೆಗಳನ್ನು ಪಶ್ಚಿಮದಿಂದ ಆಮದು ಮಾಡಿಕೊಂಡಿದ್ದಾರೆ. ಈ ಪರಿಕಲ್ಪನೆಗಳು ಮೂಲತಃ ಕ್ರೈಸ್ತ ಥಿಯಾಲಜಿಯ ಭಾಗಗಳಾಗಿವೆ. ಆದರೆ ಆಧುನಿಕ ಕಾಲದಲ್ಲಿ ಈ ಪರಿಭಾಷೆಗಳು ಕಾನೂನುಗಳಲ್ಲಿ ಪ್ರಸ್ತುತತೆ ಗಳಿಸಿಕೊಂಡು ವಿಶ್ವವ್ಯಾಪಿಯಾದವು. ಭಾರತೀಯ ಸಂಸ್ಕೃತಿಯಲ್ಲಿ ರಿಲಿಜನ್ನೇ ಇಲ್ಲದಿದ್ದರಿಂದ ಈ…
-
ನಮ್ಮ ನ್ಯಾಯಾಲಯ ವ್ಯವಸ್ಥೆಯು ಕಾನೂನು ಸಂಹಿತೆಯನ್ನಾಧರಿಸಿ ನಡೆಯುತ್ತಿವೆ. ಹಾಗಾಗಿ ಕಾನೂನಿನಿಂದ ನ್ಯಾಯವನ್ನು ಪಡೆಯುತ್ತೇವೆ ಎಂಬ ಧೋರಣೆ ಪ್ರಚಲಿತದಲ್ಲಿದೆ. ಆದರೆ ಆದರೆ ಕಾನೂನಿಂದ ನ್ಯಾಯ ಸಿಗಲೇಬೇಕೆಂದಿಲ್ಲ. ಕೆಲವೊಮ್ಮೆ ನ್ಯಾಯವು ಸಿಗಬೇಕಾದರೆ ಕಾನೂನನ್ನು ಉಲ್ಲಂಘಿಸಬೇಕಾಗುತ್ತದೆ. ಈ ಕಾರಣದಿಂದಲೇ ಭಾರತೀಯರಿಗೆ ನ್ಯಾಯಾಲಯಗಳ ಕುರಿತು ನಂಬಿಕೆ ಹುಟ್ಟಿಲ್ಲ.…
-
ಆಧುನಿಕ ಪ್ರಭುತ್ವಗಳು ಪಶ್ಚಿಮದಲ್ಲಿ ರೂಪುತಳೆದ ಸ್ಟೇಟ್ ಎಂಬ ವ್ಯವಸ್ಥೆಗಳಾಗಿದ್ದು ಅವು ಕಾನೂನಿನ ತಳಹದಿಯ ಮೇಲೆ ರಚಿತವಾದ ಆಳ್ವಿಕೆಗಳಾಗಿವೆ. ಅಂದರೆ ಇಲ್ಲಿ ಆಳುವವರು ಹಾಗೂ ಪ್ರಜೆಗಳಿಬ್ಬರೂ ಕಾನೂನುಗಳಿಂದ ನಿಯಂತ್ರಿತರಾಗಿರುತ್ತಾರೆ. ಭಾರತೀಯ ಪ್ರಜಾ ಪ್ರಭುತ್ವವು ಕೂಡ ಕಾನೂನಿನ ಆಳ್ವಿಕೆಯೇ ಆಗಿದೆ. ಕಾನೂನಿನ ಆಳ್ವಿಕೆಯ ಕಲ್ಪನೆಯು…
-
ಇಂದಿನ ಪ್ರಭುತ್ವವು ಕಾನೂನುಗಳನ್ನು ರಚಿಸಿಕೊಂಡು ಆಳ್ವಿಕೆ ನಡೆಸುತ್ತದೆ. ಪ್ರಜೆಗಳು ಕಾನೂನುಗಳನ್ನು ಗೌರವಿಸುವುದರ ಮೂಲಕ ಪ್ರಭುತ್ವವನ್ನು ಗೌರವಿಸಬೇಕೆನ್ನುತ್ತದೆ. ಆದರೆ ಭಾರತೀಯರು ಕಾನೂನುಗಳನ್ನು ಗೌರವಿಸುವಂತೆ ಕಾಣುವುದಿಲ್ಲ. ಬದಲಾಗಿ ಅವನ್ನು ಉಲ್ಲಂಘಿಸುವುದು ಹಾಗೂ ದುರುಪಯೋಗಪಡಿಸಿಕೊಳ್ಳುವುದರಲ್ಲೇ ಹೆಚ್ಚು ಆಸಕ್ತರಾಗಿದ್ದಾರೆ. ಏಕೆಂದರೆ ಕಾನೂನಿನ ಕಲ್ಪನೆ ಭಾರತೀಯ ಸಂಸ್ಕೃತಿಗೆ ಪರಕೀಯವಾದುದು.…
-
ಮನುಷ್ಯನು ನೈತಿಕ ಕ್ರಿಯೆಗಳನ್ನು ಜರುಗಿಸಬೇಕಾದರೆ ಒಂದಿಲ್ಲೊಂದು ನೈತಿಕ ಸಿದ್ಧಾಂತಗಳನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬುದಾಗಿ ಪಾಶ್ಚಾತ್ಯ ಸಂಸ್ಕೃತಿ ತಿಳಿಸುತ್ತದೆ. ಹಾಗೂ ವ್ಯಕ್ತಿಯೊಬ್ಬನ ನೈತಿಕತೆಗೆ ಸಿದ್ಧಾಂತಗಳೇ ಮಾನದಂಡ ಎಂದೂ ಅದು ಹೇಳುತ್ತದೆ. ಭಾರತೀಯರು ತಮ್ಮ ನೈತಿಕ ಕ್ರಿಯೆಗಳನ್ನು ಸಿದ್ಧಾಂತಗಳ ಸಹಾಯದಿಂದ ಜರುಗಿಸುವುದಿಲ್ಲ. ಈ ಎರಡು…