ಶಂಕರಾಚಾರ್ಯರು ಇಂದು ಒಂದು ವರ್ಗದ ಬುದ್ದಿಜೀವಿಗಳ ಟೀಕೆಗೆ ಗುರಿಯಾಗಿದ್ದಾರೆ. ಅವರೆಂದರೆ ಜಾತಿ ವ್ಯವಸ್ಥೆಯ ವಿನಾಶವನ್ನು ಪ್ರತಿಪಾದಿಸುವವರು. ಜಾತಿ ವ್ಯವಸ್ಥೆ ಎಂಬ ಕಥೆಯ ಸಾರವಿಷ್ಟು; ಇಂದು ಭಾರತದಲ್ಲಿ ಕಂಡುಬರುವ ಸಕಲ ಜಾತಿಗಳನ್ನೂ, ಅವುಗಳ ಪದ್ಧತಿಗಳನ್ನೂ ಹಾಗೂ ತರತಮಗಳನ್ನೂ ಪ್ರಾಚೀನ ಕಾಲದಲ್ಲಿ ಬ್ರಾಹ್ಮಣರು ರಚಿಸಿದರು…
-
-
ಪ್ರಾಚೀನ ಭಾರತೀಯ ಸಮಾಜವು ನಾಲ್ಕು ವರ್ಣಗಳಾಗಿ ವಿಭಾಗವಾಗಿತ್ತು ಎಂಬುದನ್ನು ನಾವು ಸ್ಕೂಲುಗಳಲ್ಲೇ ಕಲಿಯುತ್ತೇವೆ. ಅವೆಂದರೆ ಬ್ರಾಹ್ಮಣ, ಕ್ಷತ್ರಿಯ, ವೈಶ್ಯ ಮತ್ತು ಶೂದ್ರ ಎಂಬ ತರತಮ ವಿಭಜನೆ. ಈ ವಿಭಜನೆಯನ್ನು ವೇದ ಕಾಲದಲ್ಲಿ ಮಾಡಲಾಯಿತು ಹಾಗೂ ಅದು ಈಗಲೂ ಚಾಲ್ತಿಯಲ್ಲಿದೆ ಎಂಬುದಾಗಿ ಹೇಳಲಾಗುತ್ತದೆ.…
-
ಇಂದಿನ ಕೆಲವು ಚರ್ಚೆಗಳ ವರಸೆ ಹೀಗಿದೆ: ಒಂದೆಡೆ ನಾವು ಜಾಗತೀಕರಣವನ್ನು ತಡೆಯಬೇಕು ಏಕೆಂದರೆ ನಮ್ಮ ಪಾರಂಪರಿಕ ಜೀವನಕ್ರಮವನ್ನು ಅದು ನಾಶಮಾಡಿಬಿಡುತ್ತದೆ ಎಂದು ಹೇಳಲಾಗುತ್ತದೆ. ಆದರೆ ಹಾಗೆ ಹೇಳುವವರೇ ಮತ್ತೊಂದೆಡೆ ನಮ್ಮ ಪಾರಂಪರಿಕ ಜೀವನಕ್ರಮವೇ ಸರಿಯಿಲ್ಲ, ಅದು ಜಾತಿ ವ್ಯವಸ್ಥೆ, ಪುರೋಹಿತಶಾಹಿ ಹಾಗೂ…
-
ನಾವು ಇಂದು ಓದುತ್ತಿರುವ ಬೌದ್ಧ ಮತದ ಜನಪ್ರಿಯ ಇತಿಹಾಸದಲ್ಲಿ ಒಂದು ಸಮಸ್ಯೆಯಿದೆ. ಅದೆಂದರೆ ನಾವು ಕ್ರಿಶ್ಚಿಯಾನಿಟಿ ಹಾಗೂ ಇಸ್ಲಾಮಿನ ಮಾದರಿಗಳನ್ನಿಟ್ಟುಕೊಂಡು ಅವುಗಳ ಲಕ್ಷಣಗಳನ್ನು ಆರೋಪಿಸಿಕೊಂಡು ಬೌದ್ಧ ಮತ ಎಂಬುದನ್ನು ಊಹಿಸಿಕೊಳ್ಳುತ್ತಿರುತ್ತೇವೆ. ಅಂದರೆ ಬೌದ್ಧ ಮತವನ್ನು ಒಂದು ರಿಲಿಜನ್ನು ಎಂಬುದಾಗಿ ಭಾವಿಸಿಕೊಂಡು ಪಾಶ್ಚಾತ್ಯ…
-
ಇತ್ತೀಚೆಗೆ ಲಿಂಗಾಯತ ಮಠಾಧೀಶರೊಬ್ಬರು ‘ಹಿಂದೂ ಧರ್ಮ ಇಲ್ಲ ಏಕೆಂದರೆ ಹಿಂದೂಗಳು ಸಾವಿರಾರು ದೇವತೆಗಳನ್ನು ಪೂಜಿಸುತ್ತಾರೆ. ಹಾಗಾಗಿ ವೀರಶೈವರು ಹಿಂದೂಗಳಲ್ಲ, ವೀರಶೈವರು ಒಬ್ಬನೇ ದೇವತೆಯನ್ನು ಪೂಜಿಸುತ್ತಾರೆ ಹಾಗಾಗಿ ಅವರದು ಪ್ರತ್ಯೇಕ ಧರ್ಮ’ ಎಂಬ ಹೇಳಿಕೆಯನ್ನು ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈಷ್ಣವ ಮಠಾಧೀಶರೊಬ್ಬರು ‘ಹಿಂದೂಗಳು…
-
ಇಂದು ವೈಜ್ಞಾನಿಕ ಮನೋಭಾವನೆ ಎಂಬ ಪರಿಭಾಷೆಯನ್ನು ಎಲ್ಲೆಲ್ಲೂ ಕೇಳುತ್ತಿರುತ್ತೇವೆ. ಹಾಗೆಂದರೇನು ಎಂಬುದಕ್ಕೆ ಒಂದು ನಿರ್ದಿಷ್ಟ ಅರ್ಥವನ್ನೂ ಪ್ರಚುರಪಡಿಸಲಾಗಿದೆ. ವೈಜ್ಞಾನಿಕ ಮನೋಭಾವನೆಗೂ ನಮ್ಮ ಹಿಂದೂ ಸಂಪ್ರದಾಯಗಳಿಗೂ ಎಣ್ಣೆ ಸೀಗೆ ಸಂಬಂಧ ಎಂಬುದಾಗಿ ನಂಬಲಾಗಿದೆ. ಹಿಂದೂ ಸಂಪ್ರದಾಯಗಳಲ್ಲಿ ಮೌಡ್ಯ ಎಂಬುದಿರುತ್ತದೆ, ಅದನ್ನು ತೊಡೆಯಲು ಈ…
-
ನೇಪಾಳದಲ್ಲಿ ಭೂಕಂಪವಾಗಿ ಸಹಸ್ರಾರು ಜನರು ಸಾವಿಗೀಡಾದ ಸಂದರ್ಭದಲ್ಲಿ ಜಾಲತಾಣದಲ್ಲಿ ಕೋಣಗಳನ್ನು ಬಲಿ ನೀಡಿದ ಚಿತ್ರವೊಂದನ್ನು ಹಾಕಲಾಗಿತ್ತು. ಹಾಗೂ ಇಂಥ ಆಚರಣೆಯನ್ನು ಮಾಡಿದ ನೇಪಾಳಿಗರಿಗೆ ಶಿಕ್ಷೆಯಾಯಿತು ಎಂಬರ್ಥದ ಟೀಕೆಗಳು ಕಾಣಿಸಿಕೊಂಡವು. ಈ ಟೀಕೆಯು ಪ್ರಾಣಿಗಳ ದೃಷ್ಟಿಯಿಂದ ಜೀವದಯೆಯೆಂಬಂತೆ ಕಂಡರೂ ಕೂಡ ಮನುಷ್ಯರ ಸಂದರ್ಭದಲ್ಲಿ…
-
ಇಂದು ವಿಚಾರವಾದಿಯೊಬ್ಬನಿಗೆ ನಮ್ಮ ಸಾಂಪ್ರದಾಯಿಕ ಸಮಾಜದಲ್ಲಿ ಕಂಡುಬರುವ ದೊಡ್ಡ ಅನಿಷ್ಟವೆಂದರೆ ಅದು ಮೂಢಾಚಾರ ಅಥವಾ ಡಂಬಾಚಾರ, ಇತ್ತೀಚೆಗೆ ಮೂಢ ನಂಬಿಕೆ ವಿರೋಧಿ ಕಾನೂನುಗಳ ಸಂದರ್ಭದಲ್ಲಿ ಕೂಡ ಡಂಬಾಚಾರಗಳ ಪ್ರಸ್ತಾಪವಾಗುತ್ತಿದೆ. ಈ ಡಂಬಾಚಾರಗಳನ್ನು ನಿಲ್ಲಿಸಿದ ಹೊರತೂ ನಮ್ಮ ಸಮಾಜ ಉದ್ದಾರವಾಗಲು ಸಾಧ್ಯವಿಲ್ಲ ಎಂಬುದರ…
-
ಇತ್ತೀಚೆಗೆ ಕೇಂದ್ರ ಸರ್ಕಾರವು ಯೋಗದಿನವನ್ನು ಆಚರಿಸಲು ನಿರ್ಧರಿಸಿದಾಗ ಕೆಲವು ಮುಸ್ಲಿಂ ಮತೀಯ ಮುಂದಾಳುಗಳಿಂದ ಒಂದು ತಕರಾರು ಎದ್ದಿತು. ಅದೆಂದರೆ ಯೋಗದ ಹೆಸರಿನಲ್ಲಿ ಬಿಜೆಪಿ ಸರ್ಕಾರವು ಹಿಂದೂ ಮತವನ್ನು ತಮ್ಮ ಮೇಲೆ ಹೇರುತ್ತಿದೆ. ತಾವು ಸೂರ್ಯನಮಸ್ಕಾರವನ್ನು ಮಾಡಲು ನಿರಾಕರಿಸುತ್ತೇವೆ ಎಂಬುದಾಗಿ ಅವರು ಘೋಷಿಸಿದರು.…
-
ಇತ್ತೀಚೆಗೆ ದಸರಾದಲ್ಲಿ ಮಹಿಷಾಸುರನನ್ನು ಪೂಜಿಸುವ ಕಾರ್ಯಕ್ರಮವೂ ನಡೆದು ಸುದ್ದಿಯಾಯಿತು. ಈ ಪೂಜೆಯ ಹಿಂದಿನ ತರ್ಕವೆಂದರೆ, ಆರ್ಯರು ಈ ಭಾಗವನ್ನು ಆಕ್ರಮಣ ಮಾಡಿಕೊಂಡಾಗ ಸ್ಥಳೀಯ ಮೂಲನಿವಾಸಿ ನಾಯಕನನ್ನು ಸಂಹರಿಸಿ ತಮ್ಮ ವಿಜಯವನ್ನು ಸ್ಥಾಪಿಸಿ ಮಹಿಷ ಮರ್ದಿನಿಯ ಪುರಾಣವನ್ನು ಕಟ್ಟಿದರು. ಮಹಿಷಾಸುರನು ಮೂಲತಃ ಇಂಥ…